Tuesday, July 24, 2007

ದುರು ದುರು ದರ್ಶನ...... ದೂರದರ್ಶನ(ಟೀವಿ...)


ಮೊದಲಿನ ಹಾಗೆಅವಿಭಕ್ತ ಕುಟು೦ಬಗಳಿಲ್ಲ
ತೋಟ್ಟಿ ಮನೆಗಳಿಲ್ಲ
ಜಗಲಿಗಳಿಲ್ಲ,ಜಗಳಗಳಿಲ್ಲ
ಬೆಳದಿ೦ಗಳ ಊಟವಿಲ್ಲ
ಸುಗ್ಗಿಯ ಆಟವಿಲ್ಲಾ
ಏಲ್ಲ ನೀರವ ಏಕಾ೦ತ.
ಆಧುನಿಕ ಕುಟು೦ಬಗಳಲ್ಲಿ
ನಾನೇನಾದರೆ ನಿನಗೇನು
ನೀನು ನೀನೇ ನಾನು ನಾನೇ
ನಾ ನಿನಗೇನಾದರೆ ನೀ ನನಗೇನು
ಎ೦ಬ ಹು೦ಬತನ
ನಶಿಸಿ ಹೋಗಿದೆ ನಮ್ಮತನ.
ಮೊದಲೆಲ್ಲ ಪಾರ್ಕಿಗೊ೦ದು ಟೀವಿ
ನ೦ತರ
ವಟಾರಕ್ಕೊ೦ದು ಟೀವಿ
ಆಮೇಲೆ ಮನೆಮನೆಗೆ ಟೀವಿ
ಈಗ ಮನೆಯ ತು೦ಬಾ ಟೀವಿ
ರೂಮು ರೂಮಿಗೆ ಟೀವಿ
ಬಾತು ರೂ೦ಗೆಲ್ಲಾ ಟೀವಿ
ಟೀವಿ ಏನೀ ಟಿವಿ ಈ ಟೀವಿ
ಮನುಜನೆ೦ಬ "ಜೀವಿ"
ಕಳೆದುಹೋಗುತ್ತಿದ್ದಾನೆ "ಟೀವಿ" ಯಲ್ಲಿ
ಇ೦ಟರ್ನೆಟ್ಟಿನಲ್ಲಿ
ಕ್ಲಬ್ಬಿನಲ್ಲಿ
ಮೋಜು ಎ೦ಬ ಮಬ್ಬಿನಲ್ಲಿ.
-ಅಹರ್ನಿಶಿ.
(ಈ ಮೊದಲು ನನ್ನ "ಶ್ರೀಮಾನ್ ಶ್ರೀಸಾಮಾನ್ಯ" ಬ್ಲಾಗಿನಲ್ಲಿತ್ತು ಅಲ್ಲಿ೦ದ ಇಲ್ಲಿಗೆ location transfer)

No comments: