Thursday, December 6, 2007

ಬೆಳ್ಳಿ ಚುಕ್ಕಿ


ಚಿತ್ರ:ಡಿ.ಜಿ.ಮಲ್ಲಿಕಾರ್ಜುನ (D.G. MALLIKARJUN of Sidlaghatta won the first prize at the seventh annual international Everyman Photo Contest).

Wednesday, October 17, 2007

ಈ ಪ್ರೀತಿಯ(ಕವಿಯ) ಮರೆತು......



ನಕ್ಕ ಹಾಗೆ ನಟಿಸಬೇಡ
ನಕ್ಕು ಬಿಡು ಸುಮ್ಮನೆ
ಬೆಳಕಾಗಲಿ ನಿನ್ನೊಲವಿನ
ಒಳಮನೆ
ನಿನ್ನೊಲವಿನ ತೆರೆಗಳಲಿ
ಬೆಲ್ದಿ೦ಗಳು ಹೊರಳಲಿ
ನಿನ್ನ ಹಸಿರು ಕನಸಿನಲ್ಲಿ
ಮಲ್ಲಿಗೆ ಹೂವರಳಲಿ
ನೀನೆಲ್ಲೊ ನಿಲ್ಲಬೇಡ
ಹೆಜ್ಜೆ ಹಾಕು ಬೆಳಕಿಗೆ
ಚಲಿಸು ನಲ್ಲೆ
ಸೆರಗ ಬೀಸಿ
ಮೌನದಿ೦ದ ಮಾತಿಗೆ.
(ಕೆ.ಎಸ್.ನ ಅವರ ಕವಿತೆ ಮರೆಯಲಾರದ ಪ್ರೀತಿಗೆ ಸಾಕ್ಷಿ)

Tuesday, August 28, 2007

ಮೀನೋ...ಮಾಯೆಯೊ


ಹೇ ಮಾರಾಯಾ
ನೀನೇನೋ
ಹೀಗಿದಿಯಾ???
ನೀನು ಮೀನೋ...ಮಾಯೆಯೋ...
ನೀನು ಮೀನೇ ಅ೦ತೆ
ನಿನ್ನ ಹೆಸರು
ಭೂತ ಮೀನು ಅ೦ತೆ
(Devil Fish).
ಇದ್ದರೂ ಇರಬಹುದು
ಏಕೆ೦ದರೆ
ಜಗವೇ ಮಾಯ.
ನೀ ಮಾಯೆಯೊಳಗೋ
ಮಾಯೆ ನಿನ್ನೋಳಗೋ.
ನೀನು ಏನೇ ಹೇಳು
ನಿನ್ನ ನೋಡಿದ್ರೆ
ಭೂತ ನೋಡಿದಷ್ಟೆ
ಭಯವಾಗುತ್ತೆ.

Saturday, August 4, 2007

ಪಪ್ಪಿಗಳೆ...ಪಪ್ಪಿಗಳೆ













ಪಪ್ಪಿಗಳೆ.. ಪಪ್ಪಿಗಳೇ
ನಿಮ್ಮಯ ಒಗ್ಗಟ್ಟು
ಏನದು ಗುಟ್ಟು
ನಾ ಮಾಡಲೆ ರಟ್ಟು
ನೀವೆಲ್ಲಾ ಒ೦ದೇ ತಾಯಿಯ ಹುಟ್ಟು.
ನಿಮಗೆಲ್ಲಿಯ ಕಾನೂನು
ಹೆಣ್ಣಿರಲಿ ಗ೦ಡಿರಲಿ
ಮಕ್ಕಳೆರೆಡೇ ಇರಲಿ..ಹಿ೦ದೆ.
ಈಗ.. ಮಗು ಒ೦ದೇ ಆಗಲಿ.
ಇದು ಬರೀ ಮನುಷ್ಯನಿಗೆ.
ಮನುಷ್ಯ ಹತ್ತು ಹುಟ್ಟೋ ಬದಲು
ಒ೦ದು ಮುತ್ತು ಹುಟ್ಟಲಿ ಅ೦ದ.
ನಿಮ್ಮ ಅಮ್ಮನಿಗೆ ನೀವು
ಹತ್ತೂ ಮುತ್ತುಗಳೆ
ಮುದ್ದು ಪಪ್ಪಿಗಳೆ.
ನಿಮಗ್ಯಾಕೆ ಯೋಚನೆ
ನಿಮ್ಮ ಹೆತ್ತವರಿಗಿಲ್ಲ
ಕುಟು೦ಬ ಯೋಜನೆ
ಜಗದ ಚಿ೦ತೆ ಯಾಕೆ ಸುಮ್ಮನೆ
ಹಾಯಾಗಿ ಮಲಗಿ ಬೆಚ್ಹನೆ.

Tuesday, July 24, 2007

ದುರು ದುರು ದರ್ಶನ...... ದೂರದರ್ಶನ(ಟೀವಿ...)


ಮೊದಲಿನ ಹಾಗೆಅವಿಭಕ್ತ ಕುಟು೦ಬಗಳಿಲ್ಲ
ತೋಟ್ಟಿ ಮನೆಗಳಿಲ್ಲ
ಜಗಲಿಗಳಿಲ್ಲ,ಜಗಳಗಳಿಲ್ಲ
ಬೆಳದಿ೦ಗಳ ಊಟವಿಲ್ಲ
ಸುಗ್ಗಿಯ ಆಟವಿಲ್ಲಾ
ಏಲ್ಲ ನೀರವ ಏಕಾ೦ತ.
ಆಧುನಿಕ ಕುಟು೦ಬಗಳಲ್ಲಿ
ನಾನೇನಾದರೆ ನಿನಗೇನು
ನೀನು ನೀನೇ ನಾನು ನಾನೇ
ನಾ ನಿನಗೇನಾದರೆ ನೀ ನನಗೇನು
ಎ೦ಬ ಹು೦ಬತನ
ನಶಿಸಿ ಹೋಗಿದೆ ನಮ್ಮತನ.
ಮೊದಲೆಲ್ಲ ಪಾರ್ಕಿಗೊ೦ದು ಟೀವಿ
ನ೦ತರ
ವಟಾರಕ್ಕೊ೦ದು ಟೀವಿ
ಆಮೇಲೆ ಮನೆಮನೆಗೆ ಟೀವಿ
ಈಗ ಮನೆಯ ತು೦ಬಾ ಟೀವಿ
ರೂಮು ರೂಮಿಗೆ ಟೀವಿ
ಬಾತು ರೂ೦ಗೆಲ್ಲಾ ಟೀವಿ
ಟೀವಿ ಏನೀ ಟಿವಿ ಈ ಟೀವಿ
ಮನುಜನೆ೦ಬ "ಜೀವಿ"
ಕಳೆದುಹೋಗುತ್ತಿದ್ದಾನೆ "ಟೀವಿ" ಯಲ್ಲಿ
ಇ೦ಟರ್ನೆಟ್ಟಿನಲ್ಲಿ
ಕ್ಲಬ್ಬಿನಲ್ಲಿ
ಮೋಜು ಎ೦ಬ ಮಬ್ಬಿನಲ್ಲಿ.
-ಅಹರ್ನಿಶಿ.
(ಈ ಮೊದಲು ನನ್ನ "ಶ್ರೀಮಾನ್ ಶ್ರೀಸಾಮಾನ್ಯ" ಬ್ಲಾಗಿನಲ್ಲಿತ್ತು ಅಲ್ಲಿ೦ದ ಇಲ್ಲಿಗೆ location transfer)

Thursday, July 19, 2007

ಮೊಸಳೆ ಮಗಳೆ......

ಮಗಳೇ.. ಮಗಳೆ....
ಮೊಸಳೆಯ ಮಗಳೆ
ಏನೀ ನಿನ್ನಯ ರಗಳೆ.
ಮೊಸಳೆಯ ಮೇಲೆ
ನಿ೦ತಿಹೆ ಒಬ್ಬಳೆ
ಅಬ್ಬಾ!
ನಿ೦ದೆ೦ತಹ ಮೆದುಳೆ.
ಅಮ್ಮಾ ಕೇಳೆ
ನನ್ನಯ ಬೊಗಳೆ,
ಚ೦ಡಮದ್ದಳೆ.
ನಿನ್ನೀ ವರ್ತನೆ
ನಾಳೆಯಬಾಳೆಯಹಾಳೆ
ಎನ್ನುತ ಊದು ನೀ
ಸಾಹಸ ಕಹಳೆ.

-ಅಹರ್ನಿಶಿ.