Thursday, July 19, 2007

ಮೊಸಳೆ ಮಗಳೆ......

ಮಗಳೇ.. ಮಗಳೆ....
ಮೊಸಳೆಯ ಮಗಳೆ
ಏನೀ ನಿನ್ನಯ ರಗಳೆ.
ಮೊಸಳೆಯ ಮೇಲೆ
ನಿ೦ತಿಹೆ ಒಬ್ಬಳೆ
ಅಬ್ಬಾ!
ನಿ೦ದೆ೦ತಹ ಮೆದುಳೆ.
ಅಮ್ಮಾ ಕೇಳೆ
ನನ್ನಯ ಬೊಗಳೆ,
ಚ೦ಡಮದ್ದಳೆ.
ನಿನ್ನೀ ವರ್ತನೆ
ನಾಳೆಯಬಾಳೆಯಹಾಳೆ
ಎನ್ನುತ ಊದು ನೀ
ಸಾಹಸ ಕಹಳೆ.

-ಅಹರ್ನಿಶಿ.

2 comments:

ಹ.ಚ.ನಟೇಶ ಬಾಬು said...

ಹಾಯ್ ಶ್ರೀಧರ್,
ನಿಮ್ಮ ಅಕ್ಷಯ ಪಾತ್ರೆ ಬೇಗ ತುಂಬಿಸಿ..
ನಮಗಂತೂ ತೀರದ ಹಸಿವು..
-ನಟೇಶ್ ಬಾಬು, ಹ.ಚ.

ಅಹರ್ನಿಶಿ said...

ಹ.ಚ.ನ ಅವರೆ,
ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಒಟ್ಟಿಗೇ ಮಾಡ್ತಾ ಇದಿನಿ.
ಕೆಲಸದ "ಜೊತೆಜೊತೆಯಲಿ". "ಅಕ್ಷರಪಾತ್ರೆ "ನೂ ತು೦ಬಿಸಬೇಕು ಹಾಗೇ "ಶ್ರೀಮಾನ್ ಶ್ರೀಸಾಮಾನ್ಯ" ನನ್ನು ಕೂಡ ತಣಿಸಬೇಕು.ಪ್ರಯತ್ನ ಮಾಡ್ತೀನಿ.ನಮಸ್ಕಾರ.
-ಶ್ರೀಧರ್